Wednesday, March 15, 2017

ಮಾರ್ಚ್ 18 : ಮೇ ಸಾಹಿತ್ಯ ಮೇಳ- ಪೂರ್ವಭಾವಿ ಸಭೆ



ಸಂಗಾತಿಗಳೇ,
ಕಳೆದ 4 ವರ್ಷಗಳಿಂದ ನಿಮ್ಮೆಲ್ಲರ ಪಾಲ್ಗೊಳ್ಳುವಿಕೆಯ ಮೇ ಸಾಹಿತ್ಯ ಸಮಾವೇಶ ನಡೆಯುತ್ತಿದೆ. ಮೇ ಸಾಹಿತ್ಯ ಎಂಬ ಪದಗುಚ್ಛವೇ ಸಾಹಿತ್ಯ ಮತ್ತು ಪ್ರತಿರೋಧಕ್ಕಿರುವ ಅಂತರ್ ಸಂಬಂಧದ ಕುರಿತು ಹೇಳುತ್ತದೆ. ಕೋಮುವಾದಿಗಳು, ಬಹುರಾಷ್ಟ್ರೀಯ ಕಂಪನಿಗಳು ಇವತ್ತು ವೈಭವಯುತ ಲಿಟರರಿ ಫೆಸ್ಟ್ ಅನ್ನು ಆಯೋಜಿಸುತ್ತ ಅದರ ಸ್ಪಾನ್ಸರುಗಳಾಗುತ್ತ ಇರುವಾಗ, ಪ್ರತಿರೋಧದ ಒಂದು ಮಾದರಿಯಾಗಿ ಹೋರಾಟವನ್ನೂ ಅಕ್ಷರವನ್ನೂ ನಂಬಿರುವವರು ಸೇರಿ ಸಾಹಿತ್ಯ-ಸಮಕಾಲೀನ ಬಿಕ್ಕಟ್ಟುಗಳ ಕುರಿತು ಚರ್ಚಿಸುವುದು ಅವಶ್ಯವಾಗಿದೆ.
ಈ ಬಾರಿ ಮೇ 6 ಮತ್ತು 7ನೇ ತಾರೀಖು ಮೇ ಸಮಾವೇಶ ನಡೆಯಲಿದೆ. ಕಳೆದೊಂದು ವರ್ಷದಿಂದ ಸಂಭವಿಸುತ್ತಿರುವ ಆಗುಹೋಗುಗಳನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಯಾವ ವಿಷಯ ಕುರಿತು ಚರ್ಚಿಸುವುದು ಸೂಕ್ತ? ಸಂಪನ್ಮೂಲ ವ್ಯಕ್ತಿಗಳಾಗಿ ಯಾರನ್ನು ಕರೆಯಬಹುದು? ಗೋಷ್ಠಿಗಳ ಸ್ವರೂಪ ಹೇಗಿರಬೇಕು? ಮುಂತಾದ ವಿಷಯ ಕುರಿತು ಇದೇ ಭಾನುವಾರ, ತಾ. 19ರಂದು ಧಾರವಾಡದ ಅಂಬೇಡ್ಕರ್ ಭನವದಲ್ಲಿ ಮಧ್ಯಾಹ್ನ 3 ಗಂಟೆಗೆ ಸಮಾನ ಮನಸ್ಕರೆಲ್ಲ ಸೇರಿ ಚರ್ಚಿಸೋಣ. ಮೇ ಮೇಳದ ಸ್ವರೂಪ, ಆಗುವಿಕೆ ಕುರಿತು ಯೋಜಿಸೋಣ.
ಬನ್ನಿ
ಎಲ್ಲರ ಭಾಗವಹಿಸುವಿಕೆಯೇ ಮೇ ಮೇಳದ ಶಕ್ತಿ. ನಮ್ಮೊಡನಿರುವಿರಲ್ಲವೇ?
ವಿ ಆರ್, ವಿ ಆರ್, ವಿ ಆರ್ ಅ ಫ್ಯಾಮಿಲಿ..
ಜೈ ಭೀಮ್, ಲಾಲ್ ಸಲಾಂ, ಸಂಘಂ ಶರಣಂ ಗಚ್ಛಾಮಿ.
ನಿಮ್ಮ,
-ಬಸೂ, ಅನುಪಮಾ, ಬಿ ಮಾರುತಿ
ಲಡಾಯಿ ಪ್ರಕಾಶನ, ಕವಿ ಪ್ರಕಾಶನ, ಚಿತ್ತಾರ ಕಲಾಬಳಗ
ಮತ್ತು ಮತ್ತಿತರ ಪ್ರಗತಿಪರ ಸಂಘಟನೆಗಳು

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...