Sunday, March 05, 2017

364G ಬಸ್ಸನ್ನೇರಿಬಂದ ಚೆಗೆವಾರ!!


ಓದು ಸಿದ್ದೇಗೌಡ

(ಗಮನಕ್ಕೆ ತಂದವರು Rajashekhar Annigeri- ಸಂ)

ನಾನು ಚೆ ಬೆನ್ನುಹತ್ತಿ ೨ವಷ೯ಗಳಾದವು.ಚೆ ಚಿತ್ರವಿರುವ ಟೀ ಶಟ೯ನ್ನು ಕೊಂಡುಕೊಳ್ಳಬೇಕೆಂದು ಹುಡುಕಾಟ ನಡೆಸಿದ್ದೆ.ಆದರೆ ಸಿಗಲಿಲ್ಲ.ಕಳೆದ ವಷ೯ ಬೈಕ್ ಖರೀದಿಸಿದಾಗ ಚೆ ಸ್ಟಿಕ್ಕರನ್ನು ಬೈಕ್ ನ ಮುಂದೆ ಹಿಂದೆ ಅಂಟಿಸಬೇಕೆಂದು ಹೋದಾಗ ನನಗೆ ಹೊಳೆದಿದ್ದು ' ಟೀ ಶಟ್೯, ಸ್ಟಿಕ್ಕರ್ ಗಿಂತ ಆತನ ಪುಸ್ತಕಗಳನ್ನು ಓದುವುದು ಸೂಕ್ತ" ಎಂದೆನಿಸಿತು.ಬೈಕ್ ನಲ್ಲಿನ ಚೆ ಜಾಗವನ್ನು "ಅರಿವೇ ಗುರು" ಅಲಂಕರಿಸಿತು.
ಚೆ ಕೃತಿಗಳಿಗಾಗಿ ಕೆಲವು ಬುಕ್ ಹೌಸ್ ಗಳಲ್ಲಿ ಹುಡುಕಿದ್ದಾಯಿತು.ಸಿಗಲಿಲ್ಲ..ಆಗಸ್ಟ್ ೧೫,೧೬ ಸಮಾನತೆಗಾಗಿ ಜನಾಂದೋಲನ ಕಾಯ೯ಕ್ರಮಕ್ಕೆ ದಾವಣಗೆರೆ ಗೆ ಹೋದಾಗ ಅಲ್ಲಿ ಚೆಗೆವಾರ ನ 'ಮೋಟಾರ್ ಸೈಕಲ್ ಡೈರಿ' ಇತ್ತು.ಹೊರಡುವಾಗ ಕೊಳ್ಳೋಣವೆಂದು ಸುಮ್ಮನಾದೆ.ಆದರೆ ಕಾಯ೯ಕ್ರಮ ಮುಗಿಯೋ ಹೊತ್ತಿಗೆ '....
ಡೈರಿ' ಖಾಲಿಯಾಗಿತ್ತು.ನನ್ನ ಬುದ್ಧಿಗೆ ನಾನೇ ಬೈದುಕೊಂಡೆ.
ನವೆಂಬರ್ ೧೫ ರ ಸಂಜೆ ವಿಧಾನಸೌಧ ದಿಂದ ಬರುವಾಗ ಕಾಫೋ೯ರೇಷನ್ ನಲ್ಲಿ ದಾಡಿ ಬಿಟ್ಟುಕೊಂಡಿದ್ದ ಹಿರಿಯರೊಬ್ಬರು ನಮ್ಮ ಬಸ್ ಹತ್ತಿದರು.ಮುಂದೆ ಹತ್ತಿದವರು ತಿರುಗಾಡುವ ಸ್ಥಳದಲ್ಲಿ ತಮ್ಮ ದೊಡ್ಡ ಬ್ಯಾಗ್ ಇಟ್ಟು ಹಿಂದೆ ನಿಂತಿದ್ದರು.'ಇಲ್ಲಿ ಬ್ಯಾಗ್ ಇಟ್ಟರೆ ಜನ ಓಡಾಡೋದು ಹೆಂಗೆ,ಯಾರ್ದು ಈ ಲಗೇಜ್" ಎಂದಾಗ ಮಹಿಳೆಯೊಬ್ಬರು ಹಿಂದೆ ನಿಂತಿದ್ದ ಆ ಹಿರಿಯರನ್ನು ತೋರಿಸಿದ್ದರು.ಆ ಬ್ಯಾಗನ್ನು ನೋಡಿದಾಗ ಅಲ್ಲಿ ಪುಸ್ತಕಗಳಿರುವುದು ಕಣ್ಣಿಗೆ ಬಿತ್ತು.ಟ್ರಾಫಿಕ್ ಜಾಂ ಆಗಿದ್ದರಿಂದ ಯಾವ ಬುಕ್ ಗಳಿರಬಹುದು ಎಂದು ಕೈಯಾಡಿಸಿದೆ.ಲಡಾಯಿ ಪ್ರಕಾಶನದ ಹೆಸರು ಕಂಡಿತು.'ಅರೆ,ಇವರು ನಮ್ಮೋರೆ ' ಅಂದುಕೊಂಡು ಕಟ್ಟಿದ ಬ್ಯಾಗ್ ಕಳಚಿ ನೋಡಿದಾಗ ತುಂಬಾ ಖುಷಿಯಾಯ್ತು.ಅಲ್ಲಿ ಚೆ ಇದ್ದ!!
ದಾವಣಗೆರೆಯಲ್ಲಿ ಸಿಗದೇ ತಪ್ಪಿಸಿಕೊಂಡಿದ್ದ ಚೆ ಇಲ್ಲಿ ಸಿಕ್ಕಿಬಿದ್ದ! ಆ ಹಿರಿಯರು ಇಳಿಯಲು ಬಂದರು.ಪುಸ್ತಕ ಮಾರಾಟಕ್ಕಾಗಿನ ಎಂದೆ.ಅವರು ಹೌದೆಂದು ತಲೆಯಾಡಿಸಿ ೧೨೦ ( ಮೂಲ ಬೆಲೆ ೧೫೦)ಎಂದು ಕೈಲಿ ಬರೆದು ತೋರಿಸಿದರು.ಅವರಿಗೆ ಮಾತು ಬಾರದು! ಪರಿಚಿತ ಪ್ರಯಾಣಿಕರಿಂದ ಸಾಲ ಪಡೆದು ಖರೀದಿಸಿದೆ(ಹಿಂದೊಮ್ಮೆ ಪ್ರಜಾವಾಣಿಯಲ್ಲಿ ಮೌನಿ ಬಾಬಾ ನ ಅಕ್ಷರ ಕ್ರಾಂತಿ ಅನ್ನುವ ಲೇಖನ ಬಂದಿತ್ತು.ಯಾವುದೋ ಒಂದು ಕಾರಣಕ್ಕಾಗಿ ಮಾತಾಡುವುದನ್ನು ನಿಲ್ಲಿಸಿದ್ದರು."ಮಾತು ಬಾರದ" ಆ ಬಾಬಾ ಇವರೇನಾ? ಎಂದುಕೊಂಡು ಕೇಳುವಷ್ಟರಲ್ಲಿ ಅವರು ಇಳಿದಿದ್ದರು.ಅವರು ಪ್ರಯಾಣಿಸಿದ್ದು ಒಂದು ಸ್ಟಾಪ್ ಮಾತ್ರ.ಬಹುಶ: ಇವರೇ ಇರಬೇಕು)
ಸಮಾನತೆಯ ಸಮಾಜದ ಅಕ್ಷರ ಸಂಸ್ಕೃತಿ ಕಟ್ಟುವ ಗೆಳೆಯರಿಗಾಗಿ, 'ಖರೀದಿ' ಗಳ ಗೊಡವೆ ಬಿಟ್ಟು ಓದುವ ಜನಗಳ ನಂಬಿ ಪುಸ್ತಕ ಪ್ರಕಾಶನ ಮಾಡಲು ಹೊರಟಿರುವ ಪ್ರಗತಿಪರರೆಲ್ಲರ (ಪುಟ ೭,೮ )ಲಡಾಯಿ ಪ್ರಕಾಶನದ ಗೆಳೆಯರನ್ನು ನಾವು ಬೆಂಬಲಿಸೋಣ.
ಅನೆ೯ಸ್ಟೋ ಚೆ ಗೆವಾರ ಡಿ ಲಾ ಸೆರ್ನಾ ರ ಕೃತಿ ಯನ್ನು ಡಾ.ಎಚ್.ಎಸ್.ಅನುಪಮಾ ರವರು ಕನ್ನಡಕ್ಕೆ ಅನುವಾದಿಸಿದ್ದಾರೆ. ".........ಒಂದು ದೇಶದಲ್ಲಿ ಹುಟ್ಟಿ,ಮತ್ತೊಂದು ದೇಶಕ್ಕಾಗಿ ಹೋರಾಡಿ,ಮಗದೊಂದು ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣವೊಪ್ಪಿಸಿದ ಹೋರಾಟಗಾರ:ಬದುಕಿದ ೩೯ ವಷ೯ಗಳಲ್ಲಿ ವಿಶ್ವದ ಮುಕ್ಕಾಲು ದೇಶಗಳ ಸಂದಶಿ೯ಸಿದ ಜಂಗಮ:ಜಗತ್ತಿನ ಅಸಂಖ್ಯ ಜನರ ಸ್ಫೂತಿ೯;ನನ್ನಲ್ಲಿ ನಿರಂತರ ಬೆಳೆಯುತ್ತಲಿರುವ ಮಗು...(ಅನುವಾದಕರ ಮಾತು ಪುಟ ೯).
ಗೆಳೆಯರೇ, ಚೆಗೆವಾರ ನನ್ನು ಓದುವ ಆಸಕ್ತಿ ಇರುವರೆಲ್ಲರೂ ಪುಸ್ತಕವನ್ನು ಕೊಂಡು ಓದಿ.ಚೆ ನಮ್ಮ ನಿಮ್ಮೆಲ್ಲರ ಸಂಗಾತಿ.ಸ್ವಾಭಿಮಾನವನ್ನು ಬಿಡದೇ,ದೇಶಕ್ಕಾಗಿ ಹೋರಾಡಿ ಪ್ರಾಣತೆತ್ತವರನ್ನು ಅವಮಾನಿಸುತ್ತಿರುವ ಈ ಹೊತ್ತಿನಲ್ಲಿ ಚೆ ನನ್ನು ತಪ್ಪದೇ ಓದಿ.
ಎದೆಗೆ ಬಿದ್ದ ಅಕ್ಷರ
ಭುವಿಗೆ ಬಿದ್ದ ಬೀಜ
ಇಂದಲ್ಲ ನಾಳೆ ಫಲ ಕೊಡುವುದು
-ದೇವನೂರು ಮಹಾದೇವ
(ಇಂದು ಚೆ ಹುಟ್ಟಿದ ದಿನ. ಹಿಂದೊಮ್ಮೆ ನನ್ನ fb ಲಿ ಚೆ ಕುರಿತು ಬರೆದಿದ್ದೆ. ಮತ್ತೊಮ್ಮೆ ಚೆ ಗೌರವಾರ್ಥವಾಗಿ)

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...